KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ ಹೆಚ್ಚಳ
![](https://raitapijagattu.com/wp-content/uploads/2025/02/KCCLoanLimitIncrease-780x470.jpg)
ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆ ನೀಡುವ ಸಾಲ ಮಿತಿ ಹೆಚ್ಚಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card-KCC) ಯೋಜನೆಯಡಿ ಅರ್ಹ ರೈತರಿಗೆ ಪಶುಸಂಗೋಪನೆ ಚಟವಟಿಕೆಗಳಿಗೆ ಅಂದರೆ ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆಗೆ ಒದಗಿಸುವ ಆರ್ಥಿಕ ನೆರವಿನ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಕಳೆದ ಫೆಬ್ರವರಿ 2ರಂದು ಮಂಡನೆಯಾದ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union budget of India-2025) ಕೆಸಿಸಿ ಸಾಲ ಮಿತಿ ಹೆಚ್ಚಳ ಘೋಷಿಸಲಾಗಿದೆ. ಇನ್ಮುಂದೆ ರೈತರು ಪಶುಪಾಲನೆ ಚಟುವಟಿಕೆಗಳಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂ. ವರೆಗೂ ಸಾಲ ಪಡೆಯಬಹುದಾಗಿದೆ.
ಇದನ್ನೂ ಓದಿ: Dwarf Arecanut Specialty : ಕುಬ್ಜ ತಳಿ ಅಡಿಕೆ ಕೃಷಿ
3ರಿಂದ 5 ಲಕ್ಷ ರೂ.ಗೆ ಏರಿಕೆ
ದೇಶಾದ್ಯಂತ ಸುಮಾರು 7.7 ಕೋಟಿ ರೈತರಿಗೆ (ಮೀನುಗಾರರು, ಹೈನುಗಾರಿಕೆ ಮಾಡುವವರು ಸೇರಿದಂತೆ) ಅಲ್ಪಾವಧಿ ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅಡಿಯಲ್ಲಿ ಸಾಲದ ಮಿತಿಯನ್ನು ಪ್ರಸಕ್ತ 3 ಲಕ್ಷ ರೂ.ನಿಂದ 5 ಲಕ್ಷರೂ.ವರೆಗೆ ಏರಿಕೆ ಮಾಡಲಾಗಿದೆ. ಕೇಂದ್ರ ಸರಕಾರದ ಈ ಕ್ರಮವು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಪುಷ್ಟಿ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಅನಗತ್ಯವಾಗಿ ರೈತರು ಅನಧಿಕೃತ ಸಾಲದ ಸುಳಿಗೆ ಸಿಲುಕುವುದು, ಸಾಲಗಾರರ ಪೀಡನೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುವುದನ್ನು ಕೆಸಿಸಿ ಮಿತಿ ಹೆಚ್ಚಳ ತಪ್ಪಿಸಲಿದೆ. ಆಧುನಿಕ ಕೃಷಿ ಸಾಧನಗಳ ಖರೀದಿ, ಸುಸ್ಥಿರ ವ್ಯವಸ್ಥಾಯ ಪದ್ಧತಿಗಳಲ್ಲಿ ರೈತರು ತೊಡಗಿಸಿಕೊಳ್ಳಲು ಕೂಡ ಕೆಸಿಸಿ ಮಿತಿ ಹೆಚ್ಚಳ ನೆರವಾಗಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ?
ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card Yojana-KCC) ಯೋಜನೆಯು ದೇಶದ ಎಲ್ಲ ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದೆ. 1998ರಲ್ಲಿ ಜಾರಿಯಾದ ಸದರಿ ಯೋಜನೆಯಡಿ ಸದ್ಯ ದೇಶಾದ್ಯಂತ 7.4 ಕೋಟಿ ಕೆಸಿಸಿ ಖಾತೆಗಳು ಸಕ್ರಿಯವಾಗಿದ್ದು, ರೈತರಿಗೆ 8.9 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ.
ಈ ಯೋಜನೆಯಡಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕೋಳಿ, ಮೊಲ ಸಾಕಾಣಿಕೆಗೆ ರೈತರಿಗೆ ಸಾಲ ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು 3 ಲಕ್ಷ ರೂ. ಇತ್ತು ಇದೀಗ ಈ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ.
ಬಡ್ಡಿ ಸಹಾಯಧನ ಸೌಲಭ್ಯ
ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಪಡೆಯುವ ಸಾಲಕ್ಕೆ ಶೇ.2ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ.
ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿ೦ದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿದೆ.
ಇದನ್ನೂ ಓದಿ: E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?
ಸಾಲ ನೀಡುವ ಬ್ಯಾಂಕುಗಳು ಯಾವುವು?
ಪಶು ಸಂಗೋಪನೆ ರೈತರು, ಜಾನುವಾರು ಮಾಲೀಕರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವು ಉನ್ನತ ಬ್ಯಾಂಕ್‌ಗಳು ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತವೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ರೈತರು ಮೊದಲು ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬೇಕು. ನೀವು ಸಂಪರ್ಕಿಸಿದ ಬ್ಯಾಂಕ್ ಸದರಿ ಯೋಜನೆಯಡಿ ಸಾಲ ಸೌಲಭ್ಯ ಒದಗಿಸುತ್ತಿದ್ದರೆ, ಅರ್ಜಿ ನಮೂನೆಯನ್ನು ಪಡೆದು ಕೆಲವು ಏಙಅ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಯಾವುದಕ್ಕೆಲ್ಲ ಸಾಲ ಸಿಗುತ್ತದೆ?
ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.
ರೈತರು, ರೈತ ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಬಲ್ಲವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೈನುಗಾರಿಕೆ, ಮೀನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಂದಿ ಸಾಕಣೆ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277 100 200 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ