News

KMF Employees Strike : ಫೆಬ್ರವರಿ 1ಕ್ಕೆ ಕೆಎಂಎಫ್ ವಹಿವಾಟು ಸ್ಥಗಿತ

ಅನಿರ್ಧಿಷ್ಟಾವಧಿ ಮುಷ್ಕರ ಘೋಷಿಸಿದ ನೌಕರರು

ಕೆಎಂಎಫ್ (Karnataka Milk Federation) ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವು ವೇತನ ತಾರತಮ್ಯವನ್ನು ವಿರೋಧಿಸಿ ಇದೇ ಫೆಬ್ರವರಿ 1ರಿಂದ ಮುಷ್ಕರಕ್ಕೆ ಮುಂದಾಗಿದೆ. ಇದರಿಂದ ರಾಜ್ಯದಲ್ಲಿ ಹಾಲು ಸಂಗ್ರಹಣೆ, ವಿತರಣೆ ವ್ಯವಸ್ಥೆಯಲ್ಲಿ ವ್ಯತಯವಾಗುವ ಸಂಭವವಿದೆ.

WhatsApp Group Join Now
Telegram Group Join Now

ಕೆಎಂಎಫ್ ಹಾಗೂ ಎಲ್ಲಾ ಒಕ್ಕೂಟಗಳ ಅಧಿಕಾರಿಗಳು, ಸಿಬ್ಬಂದಿ ಸಂಘವು 7ನೇ ವೇತನ ಆಯೋಗದ ವರದಿಯಂತೆ ವೇತನ ಪರಿಸ್ಕರಣೆ, ಸೌಲತ್ತುಗಳನ್ನು ಯಥಾವತ್ ಜಾರಿ ಮಾಡುವಂತೆ ಪಟ್ಟು ಹಿಡಿದು ಫೆಬ್ರವರಿ 1ರಂದು ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷರು, ವ್ಯವಸ್ಥಾಪಕ ನಿದೇರ್ಶಕರಿಗೂ ಮನವಿ ಪತ್ರದಲ್ಲಿ ಹೋರಾಟದ ವಿಷಯ ತಿಳಿಸಲಾಗಿದೆ.

ಇದನ್ನೂ ಓದಿ: Union Budget 2025 : ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೊಡುಗೆ

ವೇತನ ಪರಿಷ್ಕರಣೆಗೆ ತಾಂತ್ರಿಕ ನೆಪ

ಕಳೆದ 2024 ಅಕ್ಟೋಬರ್ 1ರಿಂದ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಜಾರಿಗೊಳಿಸಲು ಆದೇಶಿಸಲಾಗಿದೆ. ತಮಗೂ 7ನೇ ವೇತನ ಆಯೋಗದ ಶಿಪಾರಸುಗಳನ್ನು ಅನ್ವಯಿಸುವಂತೆ ಕೆಎಂಎಫ್ ನೌಕರರು ಹಲವು ಬಾರಿ ಮನವಿ ಮಾಡುತ್ತ ಬಂದಿದ್ದಾರೆ.

ಸರ್ಕಾರ ವಿವಿಧ ತಾಂತ್ರಿಕ ನೆಪವೊಡ್ಡಿ ವೇತನ ಪರಿಷ್ಕರಣೆ ಮಾಡುತ್ತಿಲ್ಲ. ವೇತನ ಪರಿಷ್ಕರಣೆ ಜಾರಿಗೊಳ್ಳುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಕೆಎಂಎಫ್ ಹಾಗೂ ಎಲ್ಲಾ ಒಕ್ಕೂಟಗಳ ಅಧಿಕಾರಿಗಳು, ಸಿಬ್ಬಂದಿ ಸಂಘ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:  ಪದವಿ ಪಾಸಾದವರಿಗೆ ಸೆಂಟ್ರಲ್ ಬ್ಯಾಂಕ್’ನಲ್ಲಿ ಉದ್ಯೋಗ

ಅನಿರ್ಧಿಷ್ಟಾವಧಿ ಮಷ್ಕರ

ತಾಂತ್ರಿಕ ಅಡೆತಡೆ ನೆಪದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. 7ನೇ ವೇತನ ಆಯೋಗದ ವರದಿ ಜಾರಿಯಿಂದ ಹಾಲು ಒಕ್ಕೂಟಗಳಿಗೆ ಹೊರೆಯಾಗುವುದಿಲ್ಲ. ಆದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಮಷ್ಕರ ಅನಿವಾರ್ಯ ಎಂದು ಸಂಘಟನೆ ಹೇಳಿದೆ.

ಕೆಎಂಎಫ್ ಮತ್ತು ಒಕ್ಕೂಟಗಳು ಕಳೆದ ಹಲವು ವರ್ಷಗಳಿಂದ ಶೇ.10ರಷ್ಟು ವಹಿವಾಟು ವೃದ್ಧಿಸಿವೆ. ಆದರೆ, ಆಡಳಿತ ವೆಚ್ಚವನ್ನು ಶೇ.2ರೊಳಗೆ ಇರುವಂತೆ ಪ್ರಯತ್ನ ಮಾಡಲಾಗುತ್ತಿದೆ. ಸದ್ಯದ ಬೆಲೆ ಏರಿಕೆಯ ಕಾರಣದಿಂದಾಗಿ ವಾರ್ಷಿಕ ವೆಚ್ಚವನ್ನು ಶೇ.4 ರಿಂದ 5ಕ್ಕೆ ಹೆಚ್ಚಿಸುವಂತೆ ಕಳುಹಿಸಿದ ಪ್ರಸ್ತಾವನೆಯನ್ನು ಸಹಕಾರ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: 8th Pay commission formation : 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಂಪುಟ ಅಸ್ತು

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!