
ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission – KPSC) ಕೃಷಿ ಇಲಾಖೆಯಲ್ಲಿ (Department of Agriculture -KSDA) ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದೆ.
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಕಳೆದ ಸೆಪ್ಟೆಂಬರ್ 20, 2024 ರಂದು ಅಧಿಸೂಚನೆ ಹೊರಡಿಸಿತ್ತು. ಜನವರಿ 3ರಿಂದ ಫೆಬ್ರವರಿ 1ರ ವರೆಗೆ ಅರ್ಜಿ ಸಲ್ಲಿಸಲು ಗಡುವು ನಿಗದಿ ಮಾಡಲಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಅವಧಿ ವಿಸ್ತರಿಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರಿಂದ ಫೆಬ್ರವರಿ 15ರ ವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಈವರೆಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Pouti Khata : ಮನೆ ಬಾಗಿಲಲ್ಲೇ ಪೌತಿ ಖಾತೆ
ಹುದ್ದೆಗಳ ವಿವರ
- ಕೃಷಿ ಅಧಿಕಾರಿಗಳು (Agriculture Officer) : 128 (42 ಹೈಕ) ಹುದ್ದೆಗಳು
- ಸಹಾಯಕ ಕೃಷಿ ಅಧಿಕಾರಿಗಳು (Assistant Agriculture Officer) : 817 (231 ಹೈಕ) ಹುದ್ದೆಗಳು
- ಒಟ್ಟು ಹುದ್ದೆಗಳು : 945
ವಿದ್ಯಾರ್ಹತೆ ವಿವರ
ಕೃಷಿ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ.85 ಹುದ್ದೆಗಳಿಗೆ ಬಿಎಸ್‌ಸಿ (ಕೃಷಿ) ಅಥವಾ ಬಿಎಸ್‌ಸಿ (ಆನರ್ಸ್) ಕೃಷಿ ಪದವಿ ಪಡೆದಿರಬೇಕು. ಶೇ.15 ಹುದ್ದೆಗಳಿಗೆ ಬಿ.ಟೆಕ್ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅಗ್ರಿಕಲ್ಚರಲ್ ಇಂಜಿನಿಯರ್ ಪದವಿ ಪಡೆದಿರಬೇಕು.
ಇಲ್ಲವೇ, ಕೃಷಿ ಮಾರುಕಟ್ಟೆ ಸಹಕಾರ, ಕೃಷಿ ಮಾರಾಟ ಮತ್ತು ಸಹಕಾರ, ಅಗ್ರಿ ಬಿಜಿನೆಸ್ ಮ್ಯಾನೇಜ್ ಮೆಂಟ್, ಕೃಷಿ ಜೈವಿಕ ತಂತ್ರಜ್ಞಾನ, ಅಗ್ರಿಕಲ್ಬರಲ್ ಇಂಜಿನಿಯರಿ೦ಗ್‌ನಲ್ಲಿ ಬಿಎಸ್‌ಸಿ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು.
ಇದನ್ನೂ ಓದಿ: Micro Finance Ordinance 2025 : ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ
ವಯೋಮಿತಿ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಟ ವಯೋಮಿತಿಯು ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಹಿಂದುಳಿದ ವರ್ಗದವರಿಗೆ 41 ವರ್ಷ ಹಾಗೂ ಪ್ರವರ್ಗ-1 ಹಾಗೂ ಪರಿಶಿಷ್ಟರಿಗೆ 43 ವರ್ಷ ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ ವಿವರ
- ಕೃಷಿ ಅಧಿಕಾರಿ : 43,100 ರಿಂದ 83,900 ರೂ.,
- ಸಹಾಯಕ ಕೃಷಿ ಅಧಿಕಾರಿ : 40,900 ರಿಂದ 78,200 ರೂ.,
ಅರ್ಜಿ ಶುಲ್ಕದ ವಿವರ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಉಳಿದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ., ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 300 ರೂ., ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ., ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ನೇಮಕ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಒಟ್ಟು ಅಂಕಗಳಲ್ಲಿ ಶೇ.35 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ
One Comment