AgricultureNews

MenasinaKayi Mela 2025 : ಜನವರಿ 31ರಿಂದ ಒಣ ಮೆಣಸಿನಕಾಯಿ ಮೇಳ

ರೈತರೇ ಕೂಡಲೇ ನಿಮ್ಮ ಹೆಸರು ನೋಂದಾಯಿಸಿ...

ಮೆಣಸಿನಕಾಯಿ ಮೇಳದ ವಿಶೇಷತೆ ಏನು? ಮೇಳದಲ್ಲಿ ಪಾಲ್ಗೊಳ್ಳಲು ರೈತರು ನೋಂದಣಿ ಮಾಡುವುದು ಹೇಗೆ? ರೈತರಿಗೂ ಗ್ರಾಹಕರಿಗೂ ಇದರಿಂದಾಗುವ ಪ್ರಯೋಜನವೇನು? ಎಂಬ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಮತ್ತೊಂದು ಮೆಣಸಿನಕಾಯಿ ಮೇಳಕ್ಕೆ ಹುಬ್ಬಳ್ಳಿ ಸನ್ನದ್ಧವಾಗಿದೆ. ಇದೇ ಜನವರಿ 31ರಿಂದ ಫೆಬ್ರವರಿ 2ರ ವರೆಗೆ ನಗರದ ಅಮರಗೋಳ ಎಪಿಎಂಸಿ ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣದಲ್ಲಿ 13ನೇ ಒಣ ಮೆಣಸಿನಕಾಯಿ ಮೇಳವನ್ನು ಆಯೋಜಿಸಲಾಗಿದೆ.

ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನ್ಯಾಯಯುತ ಬೆಲೆ ಒದಗಿಸುವ ಸದುದ್ದೇಶದಿಂದ ಹುಬ್ಬಳ್ಳಿಯಲ್ಲಿ ಒಣ ಮೆಣಸಿನಕಾಯಿ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ರೈತರು ಮುಂಚಿತವಾಗಿ ನೋಂದಣಿಯನ್ನು ಆಯಾ ತಾಲ್ಲೂಕು ತೋಟಗಾರಿಕೆ ಕಚೇರಿಗಳಲ್ಲಿ, ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Karnataka Animal Husbandry Subsidy Schemes : ಪಶುಪಾಲನಾ ಇಲಾಖೆ ಸಬ್ಸಿಡಿ ಯೋಜನೆಗಳು

ಏನಿದು ಮೆಣಸಿನಕಾಯಿ ಮೇಳ?

ಕೃಷಿಮೇಳ, ತೋಟಗಾರಿಕೆ ಮೇಳ, ಸಾವಯವ ಮೇಳ, ಸಿರಿಧಾನ್ಯ ಮೇಳಗಳಂತೆ ‘ಒಣ ಮೆಣಸಿನಕಾಯಿ ಮೇಳ’ವನ್ನು ಕೂಡ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನ್ಯಾಯಯುತ ಬೆಲೆ ಒದಗಿಸುವ ಸದುದ್ದೇಶದಿಂದ ಆಯೋಜಿಸುತ್ತ ಬರಲಾಗುತ್ತಿದೆ. ಕಳೆದ 12 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಈ ಮೇಳವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಮೊದಮೊದಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಮೆಣಸಿನಕಾಯಿ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತಿತ್ತು. ಈ ವಿಚಾರ ಸಂಕೀರ್ಣವೇ ಕ್ರಮೇಣ (2011ರಿಂದ) ಮೆಣಸಿನಕಾಯಿ ಮೇಳವಾಗಿ ಏರ್ಪಟ್ಟಿದೆ. ಇದೊಂದು ಅಪರೂಪದ ಮೇಳವಾಗಿ ಬಹುಬೇಗ ಸುಪ್ರಸಿದ್ಧಿ ಕೂಡ ಪಡೆದಿದೆ.

ಇದನ್ನೂ ಓದಿ: E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?

ಮೆಣಸಿನಕಾಯಿ ಬೆಳೆದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರಾಟಕ್ಕೆ ಅವಕಾಶ ಒದಗಿಸುವ ಸಲುವಾಗಿ ಹಾಗೂ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಗುಣಮಟ್ಟದ ಮೆಣಸಿನಕಾಯಿ ಒದಗಿಸುವುದಕ್ಕಾಗಿ ಈ ಮೇಳವನ್ನು ಆರಂಭಿಸಲಾಗಿದೆ. ಮೆಣಸಿನಕಾಯಿ ಬೆಳೆದ ರೈತರಿಗೆ, ಸ್ವಸಹಾಯ ಸಂಘಗಳಿಗೆ ಇಲ್ಲಿ ಮಳಿಗೆಗಳನ್ನು ನೀಡಲಾಗುತ್ತದೆ.

ಮೇಳಕ್ಕೆ ಆಗಮಿಸುವ ಗ್ರಾಹಕರು ಉತ್ತಮ ಗುಣಮಟ್ಟದ ಮೆಣಸಿಕಾಯಿಯನ್ನು ಯೋಗ್ಯ ಬೆಲೆಗೆ ಖರೀದಿಸುತ್ತಾರೆ. ಇದರಿಂದ ರೈತರು ಮತ್ತು ಗ್ರಾಹಕರು ಇಬ್ಬರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಮೇಳದಲ್ಲಿ ಮಳಿಗೆ ತೆರೆದ ಅನುಭವವಿರುವ ರೈತರು.

ಇದನ್ನೂ ಓದಿ: Free Dairy and Poultry Training : ಹೈನುಗಾರಿಕೆ, ಕೋಳಿ ಸಾಕಾಣಿಕೆ ಉಚಿತ ತರಬೇತಿ

ವಿವಿಧ ಮೆಣಸಿನಕಾಯಿ ತಳಿಗಳ ಮಹಾಪ್ರದರ್ಶನ

ವಿಶೇಷವೆಂದರೆ ಇಲ್ಲಿ ಬರೀ ಮೇಣಸಿನಕಾಯಿ ಮಾರಾಟ ಮತ್ತು ಖರೀದಿ ಮಾತ್ರ ಇರುವುದಿಲ್ಲ. ಮುಖ್ಯವಾಗಿ ನೀವು ನೋಡಿಯೇ ಇರದ ವೈವಿಧ್ಯಮಯ ಮೆಣಸಿನಕಾಯಿ ತಳಿಗಳ ಮಹಾ ಪ್ರದರ್ಶನ ಕೂಡ ಇರುತ್ತದೆ. ಇದರ ಜೊತೆಗೆ ಈ ಕೆಳಕಂಡ ಪ್ರದರ್ಶಮ, ಮಾರಾಟ ಕೂಡ ಇರಲಿದೆ:

  • ರೆಡಿಮೇಡ್ ಖಾರದ ಪುಡಿ
  • ಮೆಣಸಿನಕಾಯಿಯ ಉಪ್ಪಿನಕಾಯಿ
  • ಮೆಣಸಿನಕಾಯಿಯಿಂದ ಮಾಡಿದ ರಂಜಕ
  • ಸುಧಾರಿತ ವಿವಿಧ ಮೆಣಸಿನ ತಳಿಗಳ ಪ್ರದರ್ಶನ
  • ಹಸಿರುಮನೆಯಲ್ಲಿ ಬೆಳೆದ ವಿವಿಧ ಬಣ್ಣದ ಡೊಣ್ಣೆ ಮೆಣಸಿನಕಾಯಿ
  • ಮೆಣಸಿನಕಾಯಿ ಹಾಗೂ ಖಾರದಪುಡಿಯ ಗಾಳಿರಹಿತ ಪ್ಯಾಕಿಂಗ್
  • ಮೆಣಸಿನಕಾಯಿ ಬೆಳೆಗೆ ಸಂಬAಧಿಸಿ ಸಮಸ್ಯೆಗೆ ಸ್ಥಳದಲ್ಲಿಯೇ ತಜ್ಞರಿಂದ ಪರಿಹಾರ

ಈ ವರ್ಷ ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಮರಶಿವ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ನಡೆಯಲಿದೆ ಎಂದರು. ಜನವರಿ 31ರಿಂದ ಫೆಬ್ರವರಿ 2ರ ವರೆಗೆ ಒಟ್ಟು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ರೈತರಿಗೂ, ಗ್ರಾಹಕರಿಗೂ ಇದೊಂದು ಮಹತ್ವದ ಮೇಳವಾಗಿದ್ದು; ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಕಳೆದ ವರ್ಷದ ಮೇಳದಲ್ಲಿ 100 ರೈತರು ಭಾಗವಹಿಸಿದ್ದರು. 305 ಕ್ವಿಂಟಾಲ್ ಒಣಮೆಣಸಿನಕಾಯಿ ಮಾರಾಟವಾಗಿದ್ದು, 1.37 ಕೋಟಿ ರೂ. ವಹಿವಾಟು ನಡೆದಿತ್ತು. ಪ್ರಸಕ್ತ ವರ್ಷ ರಾಜ್ಯದಲ್ಲಿ ಅಂದಾಜು 2.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, 3.37 ಲಕ್ಷ ಟನ್ ಉತ್ಪಾದನೆ ನಿರೀಕ್ಷೆಯಿದೆ.

ಇದನ್ನೂ ಓದಿ: Line 883 Onion : ಎಕರೆಗೆ 325 ಕ್ವಿಂಟಾಲ್ ಇಳುವರಿ ಕೊಡುವ ಹೊಸ ತಳಿ ಇರುಳ್ಳಿ

ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ

ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಸಕ್ತ ರೈತರು ತಮ್ಮ ಹೆಸರನ್ನು ಜನವರಿ 27ರೊಳಗಾಗಿ ಈ ಕೆಳಕಂಡ ಸಂಸ್ಥೆಗಳ ಕಚೇರಿಯಲ್ಲಿ ಪಹಣಿ ಮತ್ತು ಆಧಾರ್ ಕಾರ್ಡ್, ವೋಟರ್ ಐಡಿ ಪ್ರತಿಯೊಂದಿಗೆ ನೋಂದಾಯಿಸಬಹುದಾಗಿದೆ. ಜೊತೆಗೆ ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ.

  • ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ : 0836 2375030
  • ಹುಬ್ಬಳ್ಳಿ ತೋಟಗಾರಿಕೆ ಇಲಾಖೆ : 0836 2355138
  • ಧಾರವಾಡ ತೋಟಗಾರಿಕೆ ಇಲಾಖೆ : 0836 2746334
  • ನವಲಗುಂದ ತೋಟಗಾರಿಕೆ ಇಲಾಖೆ : 08380 229170
  • ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ : 08304 296297

Google pay instant loan: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!