ಮೈಕ್ರೋ ಫೈನಾನ್ಸ್ (Micro Finance) ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಸುಗ್ರೀವಾಜ್ಞೆ ಕರಡನ್ನು ತಯಾರಿಸಿದೆ. ಇನ್ಮುಂದೆ ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಮನ್ನಾ ಆಗಲಿದೆ.
ನೋಂದಣಿ ರಹಿತ ಮತ್ತು ಪರವಾನಗಿ ರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು (Moneylenders) ನೀಡಿರುವ ಸಾಲದ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಸಾಲಗಾರರು ಮರುಪಾವತಿ ಮಾಡಬೇಕಿಲ್ಲ. ಅಷ್ಟೂ ಸಾಲ ಮನ್ನಾ ಆಗಲಿದೆ ಎಂಬ ಮಹತ್ವದ ಅಂಶವನ್ನು ಕರಡಿನಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
3 ವರ್ಷ ಜೈಲು, 5 ಲಕ್ಷ ರೂ. ದಂಡ
ಮೈಕ್ರೋ ಫೈನಾನ್ಸ್ ಕಂಪನಿಗಳು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ-2025’ (Karnataka micro finance (prevention of coercive actions) ordinance-2025) ಅನ್ನು ಹೊರಡಿಸಲು ರಾಜ್ಯ ಸರಕಾರ ಮುಂದಾಗಿದ್ದು, ಅದರ ಭಾಗವಾಗಿ ಕರಡು ಪ್ರತಿಯನ್ನು ಅಂತಿಮಗೊಳಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರು ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡಿದರೆ ಆರು ತಿಂಗಳಿಗಿ೦ತ ಕಡಿಮೆ ಇಲ್ಲದ, ಮೂರು ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಜೊತೆಗೆ ಬರೋಬ್ಬರಿ 5 ಲಕ್ಷ ರೂ.ವರೆಗೆ ದಂಡ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
ನೂತನ ಕರಡಿನಲ್ಲಿ ಏನೇನಿದೆ?
- ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ಆಯಾ ನೋಂದಣಿ ಪ್ರಾಧಿಕಾರದಲ್ಲಿ (ಜಿಲ್ಲಾಧಿಕಾರಿ) ನೋಂದಣಿ ಮಾಡಿಕೊಳ್ಳಬೇಕು.
- ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿ ದರ, ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು.
- ಮೈಕ್ರೋ ಫೈನಾನ್ಸ್ ಕಂಪನಿ, ಲೇವಾದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ಮಾಡುವಂತಿಲ್ಲ.
- ನೋಂದಣಿ ಅವಧಿ ಒಂದು ವರ್ಷ ಮಾತ್ರ. ಅವಧಿ ಮುಗಿಯುವ 60 ದಿನಗಳ ಮೊದಲು ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
- ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿ ಸಿದರೆ, ಪ್ರಾಧಿಕಾರವು ನೋಂದಣಿಯನ್ನು ರದ್ದು ಮಾಡಬಹುದು.
- ಸಾಲಗಾರರಿಂದ ಭದ್ರತೆಗಾಗಿ ಅಡಮಾನ ಇಟ್ಟುಕೊಳ್ಳಬಾರದು.
ಇದನ್ನೂ ಓದಿ: ಬ್ಯಾಂಕ್ ಮತ್ತು ಫೈನಾನ್ಸ್’ಗಳಿಂದ ಪಡೆದ ಸಾಲ ಕಟ್ಟದಿದ್ದರೆ ಏನಾಗುತ್ತದೆ?
ಯಾವುದಕ್ಕೆಲ್ಲ ನಿರ್ಬಂಧ ವಿಧಿಸಿದೆ?
ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುವುದು, ಅವಮಾನಿಸುವುದು, ಅಡ್ಡಿಪಡಿಸುವುದು, ಹಿಂಸಿಸುವ೦ತಿಲ್ಲ. ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು, ಅವರ ಸ್ವಾಧೀನದಲ್ಲಿರುವ ಸ್ವತ್ತುಗಳ ಬಳಕೆಗೆ ಅಡ್ಡಿಪಡಿಸುವಂತಿಲ್ಲ.
ಸಾಲಗಾರರು ಅಥವಾ ಅವರ ಕುಟುಂಬದವರು ವಾಸಿಸುವ, ಕೆಲಸ ಮಾಡುವ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿ ಚಟುವಟಿಕೆಗಳಿಗೆ ಅಡ್ಡಿಪಡಿಸುವಂತಿಲ್ಲ. ಬಲವಂತದಿ೦ದ ಸಾಲ ವಸೂಲಿ ಮಾಡಲು ಹೊರಗುತ್ತಿಗೆ ಸಿಬ್ಬಂದಿ ಬಳಕೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಬಳಸಿಕೊಳ್ಳುವಂತಿಲ್ಲ.
ಇದನ್ನೂ ಓದಿ: ಬ್ಯಾಂಕ್ ಮತ್ತು ಫೈನಾನ್ಸ್’ಗಳಿಂದ ಪಡೆದ ಸಾಲ ಕಟ್ಟದಿದ್ದರೆ ಏನಾಗುತ್ತದೆ?