AgricultureNews

Murraya exotica : ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ ತರುವ ಬೆಳೆ

ಸಣ್ಣ ರೈತರಿಗೆ ವರದಾನವಾಗುವ ಮರ‍್ರಯಾ ಎಗ್ಜೊಟಿಕಾ ಅಲಂಕಾರಿಕ ಗಿಡ

ಬೆಂಗಳೂರಿನ ವರ್ತೂರು ಗ್ರಾಮದ ವೇಣುಗೋಪಾಲ ರೆಡ್ಡಿ ಅವರು ತಮ್ಮ ತೋಟದಲ್ಲಿ ವಿಭಿನ್ನವಾದ ಮರ‍್ರಯಾ ಎಗ್ಜೊಟಿಕಾ (Murraya exotica) ಎನ್ನುವ ಲಾಭದಾಯಕ ಗಿಡಗಳನ್ನು ಬೆಳೆಯುತ್ತಿದ್ದಾರೆ. ಇದೇನಿದು? ಮರ‍್ರಯಾ ಎಗ್ಜೊಟಿಕಾ?! ಗಿಡ ಎಂದು ಆಶ್ಚರ್ಯವಾಗಬಹುದು. ಇಂತಹದೊ೦ದು ಸಸ್ಯ ಇದೆ ಎನ್ನುವುದು ರಾಜ್ಯದ ಅನೇಕ ರೈತರಿಗೆ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಗಿಡವನ್ನು ಬೆಂಗಳೂರಿನ ಸುತ್ತಮುತ್ತಲಿನ ರೈತರು ಬೆಳೆಯುತ್ತಿದ್ದಾರೆ.

WhatsApp Group Join Now
Telegram Group Join Now

ಈ ಕೃಷಿಯಿಂದ ರೈತರು ಪ್ರತಿ ಮೂರು ತಿಂಗಳಿಗೊಮ್ಮೆ ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ. ದೊಡ್ಡ ದೊಡ್ಡ ರೈತರು ಮಾತ್ರ ಈ ಗಿಡಗಳನ್ನು ಬೆಳೆದು ಹಣವನ್ನು ಗಳಿಸುತ್ತಿದ್ದಾರೆ ಎಂದುಕೊ೦ಡರೆ ತಪ್ಪು. ಅತೀ ಕಡಿಮೆ ಜಮೀನು ಇರುವ ಸಣ್ಣ ಸಣ್ಣ ರೈತರು ಕೂಡ ಈ ಮರ‍್ರಯಾ ಎಗ್ಜೊಟಿಕಾ ಗಿಡಗಳನ್ನು ಬೆಳೆದು ಮೂರು ತಿಂಗಳಿಗೊಮ್ಮೆ ಕಟಾವು ಮಾಡಿ 2-3 ಲಕ್ಷದ ವರೆಗೆ ಹಣ ಗಳಿಸುತ್ತಿದ್ದಾರೆ. ವರ್ಷಕ್ಕೆ ಹತ್ತರಿಂದ ಹನ್ನೆರಡು ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು

ಇದು ಕಾಡಿನ ಬೆಳೆ

ಮರ‍್ರಯಾ ಎಗ್ಜೊಟಿಕಾ ಗಿಡಗಳು ಮಹಾರಾಷ್ಟ್ರದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತೇವೆ. ಸ್ಥಳೀಯವಾಗಿ ಕಾಡು ಕರಿಬೇವಿನ ಗಿಡ ಎಂದು ಕರೆಯಲ್ಪಡುವ ಇದು ಪೊದೆ ಪೊದೆಯಾಗಿ ಬೆಳೆಯುವ ಗಿಡವಾಗಿದೆ. ತಟ್ಟನೆ ನೋಡಲು ಕರಿಬೇವಿನ ಗಿಡಗಳ ಹಾಗೆ ಇರುತ್ತದೆ. ಆದರೆ ಅಡುಗೆಗೆ ಬಳಸುವುದಿಲ್ಲ. ಸದ್ಯ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುವ ನಿಶ್ಚಿತಾರ್ಥ, ಮದುವೆ, ಮುಂಜಿ ಸೇರಿದಂತೆ ಶುಭ ರ್ಯಕ್ರಮಗಳಲ್ಲಿನ ವೇದಿಕೆಯ ಅಲಂಕಾರಕ್ಕೆ ಹೆಚ್ಚಾಗಿ ಬಳಸುವ ಸಸ್ಯ ಇದಾಗಿದೆ.

ಈ ಗಿಡಗಳ ಸಣ್ಣ ಸಣ್ಣ ಟೊಂಗೆಗಳಿ೦ದ ಕೂಡಿರುವ ಒಂದು ಬಂಚ್‌ಗೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 40 ರಿಂದ 50 ರೂಪಾಯಿ ಇದ್ದೇ ಇರುತ್ತದೆ. ಇನ್ನೂ ಸೀಸನ್‌ನಲ್ಲಿ ಒಂದು ಬಂಚ್‌ಗೆ 80 ರೂಪಾಯಿಯವರೆಗೂ ಮಾರಾಟವಾಗುತ್ತದೆ. ಹೊಲದಲ್ಲಿ ಸಸಿಗಳನ್ನು ಹಾಕಿದ ಒಂದು ವರ್ಷದ ಬಳಿಕ ಮೂರು ತಿಂಗಳೊಮ್ಮೆ ಕಟಾವು ಮಾಡಬಹುದು. ಒಂದು ಎಕರೆಯಲ್ಲಿ ತಲಾ ಒಂದೊ೦ದು ಕಟಾವಿಗೆ 2.5 ಲಕ್ಷ ಆದಾಯವನ್ನು ಗಳಿಸಬಹುದು ಎನ್ನುವುದು ವೇಣುಗೋಪಾಲ ರೆಡ್ಡಿಯವರ ಅನಿಸಿಕೆ.

ಸದ್ಯ ವೇಣುಗೋಪಾಲ ರೆಡ್ಡಿ ಅವರು ಇರುವ ವರ್ತೂರು ಗ್ರಾಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಕೊಂಡು ದೊಡ್ಡ ನಗರವಾಗಿ ಬೆಳೆದುಕೊಂಡಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಆದರೆ ವೇಣುಗೋಪಾಲ ರೆಡ್ಡಿ ಅವರು ತಮ್ಮ ಮನೆಯ ಹಿಂದೆ ಒಂದು ಎಕರೆಗೂ ಹೆಚ್ಚಿನ ಭೂಮಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Cheese milk : ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ

ಕಡಿಮೆ ಖರ್ಚು ಹೆಚ್ಚು ಆದಾಯ

ಸ್ಥಳೀಯವಾಗಿ ಈ ಗಿಡವನ್ನು ‘ಕಾಮಿನಿ ಎಲೆ’ ಗಿಡ ಎನ್ನುತ್ತಾರೆ. ಈ ಗಿಡಗಳ ಕೃಷಿ ಬೆಂಗಳೂರಿನ ಸುತ್ತಮುತ್ತಲೂ ಇತ್ತೀಚಿನ ಎರಡು ಮೂರು ವರ್ಷಗಳಿಂದ ರೈತರು ಬೆಳೆಯುತ್ತಿದ್ದಾರೆ. ಇದೊಂದು ಪಕ್ಕಾ ವಾಣಿಜ್ಯ ಬೆಳೆಯಾಗಿದೆ. ಈ ಮರ‍್ರಯಾ ಎಗ್ಜೊಟಿಕಾ ಗಿಡಗಳನ್ನು ಬೆಳೆಯಲು ಹೆಚ್ಚಿನ ಖರ್ಚು ಇಲ್ಲವೇ ಎನ್ನುತ್ತಾರೆ ವೇಣುಗೋಪಾಲ ರೆಡ್ಡಿ.

ಕೇವಲ ಒಂದು ಎಕರೆ ಭೂಮಿ ಇರುವ ಸಣ್ಣ ರೈತರು ಸಹ ಮೂರು ತಿಂಗಳಿಗೊಮ್ಮೆ ಲಕ್ಷ ಲಕ್ಷ ಆದಾಯವನ್ನು ಪಡೆಯಬಹುದು ಎನ್ನುವರು ಮೊದಲ ಬಾರಿಗೆ ತಮ್ಮ ತೋಟದಲ್ಲಿ ಮರ‍್ರಯಾ ಎಗ್ಜೊಟಿಕಾ ಗಿಡಗಳನ್ನು ಬೆಳೆದಿದ್ದಾರೆ. ಇದರ ಸಸಿಗಳನ್ನು ತಂದು ಭೂಮಿಯಲ್ಲಿ ನೆಟ್ಟು ಬೆಳಸಬೇಕಾಗುತ್ತದೆ. ಒಂದು ಸಸಿಯ ಬೆಲೆ ಕೂಡ ನೂರಾರು ರೂಪಾಯಿ ಇಲ್ಲ. 20 ರಿಂದ 30 ರೂಪಾಯಿಗಳವರೆಗೆ ಮಾತ್ರ ಇದೆ.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ | ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ

ಮರ‍್ರಯಾ ಎಗ್ಜೊಟಿಕಾ ನಿರ್ವಹಣೆ ಹೇಗೆ?

ಕೈಗೆ ಎಟಕುವ ಬೆಲೆಯಲ್ಲಿ ಮರ‍್ರಯಾ ಎಗ್ಜೊಟಿಕಾ ಸಸಿಗಳು ಬೆಂಗಳೂರಿನ ಸುತ್ತಮುತ್ತಲಿನ ನರ್ಸರಿಗಳಲ್ಲಿ ಸಿಗುತ್ತವೆ. ಸಸಿಗಳನ್ನು ಬೆಳೆಯಲು ಹೆಚ್ಚಿನ ಖರ್ಚು ಇಲ್ಲವೇ ಇಲ್ಲ. ಆದರೆ ಭೂಮಿಯಲ್ಲಿ ಸಸಿಗಳನ್ನು ನಾಟಿ ಮಾಡಿದ ಬಳಿಕ ಸಕಾಲಕ್ಕೆ ನಾಟಿ ಗೊಬ್ಬರವನ್ನು ಕೊಡಬೇಕು. ದಿನ ಬಿಟ್ಟು ದಿನ ನೀರುಣಿಸಬೇಕು.

ಆಗಾಗ ಕೀಟಗಳಿಂದ ರಕ್ಷಿಸಲು ಔಷಧೀಯನ್ನು ಸಹ ಸಿಂಪಡಿಸಬೇಕು. ನಾಲ್ಕೆöÊದು ತಿಂಗಳುಗಳ ಬಳಿಕ ಸಸಿಗಳು ಗಿಡಗಳಾಗಿ ಬೆಳೆದು ನಿಲ್ಲುತ್ತವೆ. ಆ ಬಳಿಕ ಹೆಚ್ಚು ಶ್ರಮಪಡುವ ಅಗತ್ಯವಿಲ್ಲ. ಆದರೆ ಗಿಡಗಳ ಕೆಳಗೆ ಕಳೆ ಸಸ್ಯಗಳು ಬೆಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಹಾಗೆ ನೋಡಿಕೊಂಡರೆ ಗಿಡಗಳು ಬಹಳ ಬೇಗನೆ ಎತ್ತರಕ್ಕೆ ಬೆಳೆಯುತ್ತವೆ. ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ ಎನ್ನುತ್ತಾರೆ ವೇಣುಗೋಪಾಲ ರೆಡ್ಡಿ.

ಇದನ್ನೂ ಓದಿ: ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…

ಹೊಲದಲ್ಲಿ ಕಳೆ ಇರಬಾರದು. ಇದ್ದರೆ ಹೊಲಕ್ಕೆ ಕಳೆನೇ ಇರದು. ಮರ‍್ರಯಾ ಎಗ್ಜೊಟಿಕಾ ಗಿಡಗಳ ಬುಡದಲ್ಲಿ ಹೆಚ್ಚು ನೆರಳು ತಂಪು ಇರುವುದರಿಂದ ಕಳೆ ಸಸ್ಯಗಳು ಯಥೇಚ್ಛವಾಗಿ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಗಿಡಗಳ ಬುಡದಲ್ಲಿ ಆಗಾಗ ಕಳೆ ಸಸ್ಯಗಳು ಬೆಳೆದುಕೊಳ್ಳದಂತೆ ನೋಡಿಬೇಕು. ಏನೇ ಆಗಲಿ ಹೆಚ್ಚಿನ ಖರ್ಚು ಇಲ್ಲದೆ ಹೆಚ್ಚು ಹೆಚ್ಚು ಆದಾಯವನ್ನು ನೀಡುವ ಮರ‍್ರಯಾ ಎಗ್ಜೊಟಿಕಾ ಗಿಡಗಳನ್ನು ಒಂದಿಷ್ಟು ಮುತುರ್ವಜಿಯಿಂದ ನೋಡಿಕೊಂಡರೆ ನಮಗೆ ಒಳ್ಳೆಯದು ಎನ್ನುತ್ತಾರೆ ವೇಣುಗೋಪಾಲ ರೆಡ್ಡಿ.

ಮರ‍್ರಯಾ ಎಗ್ಜೊಟಿಕಾ ಮಾರುಕಟ್ಟೆ ಹೇಗೆ?

ಹೌದು, ಇದರ ಮಾರುಕಟ್ಟೆ ಪ್ರತ್ಯೇಕವಾಗಿ ಎಲ್ಲೂ ಇಲ್ಲ. ಸದ್ಯ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ದಿನವೂ ಮಾರಾಟ ಮಾಡಲು ವ್ಯವಸ್ಥೆ ಇದೆ. ಇದರ ಕೃಷಿ ಚಟುವಟಿಕೆ ಎಲ್ಲಾ ಕಡೆಗಳಲ್ಲಿ ಆರಂಭವಾದರೆ ಅಲ್ಲಿಲ್ಲಿ ಕೃಷಿ ಇಲಾಖೆಯಾಗಲಿ, ಹೂವುಗಳ ಮಾರಾಟಗಾರರು ಮಾರುಕಟ್ಟೆಗೆ ಅವಕಾಶವನ್ನು ಕಲ್ಪಿಸಿಕೊಡಬಹುದು.

| ಹ. ಸ. ಬ್ಯಾಕೋಡ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!