Govt SchemesNews

Panchamitra whatsapp chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಸಿಗುತ್ತಿರುವ ಹಲವು ಇಲಾಖೆಗಳ ಸರ್ಕಾರಿ ಸೇವೆಗಳನ್ನು ಇನ್ನು ಮುಂದೆ ವ್ಯಾಟ್ಸಪ್‌ನಲ್ಲಿ ಲಭ್ಯವಾಗುವಂತೆ ವಿನೂತನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

WhatsApp Group Join Now
Telegram Group Join Now

ದೇಶದಲ್ಲಿಯೆ ಮೊಟ್ಟಮೊದಲ ಬಾರಿಗೆ ಈ ವಿನೂತನ ಡಿಜಿಟಲ್ ವೇದಿಕೆಯನ್ನು ಜಾರಿಗೆ ತಂದಿದ್ದು; ವಾಟ್ಸಾಪ್ ಮುಖಾಂತರ ಸರಕಾರಿ ಸೇವೆಗಳನ್ನು ಪಡೆಯುವುದು ಹೇಗೆ? ಯಾವೆಲ್ಲ ಸೇವೆಗಳನ್ನು ಪಡೆಯಬಹುದಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಗ್ರಾಮೀಣ ಸೇವೆಗೆ ಪಂಚಮಿತ್ರ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಾರ್ವಜನಿಕರು ಅನಗತ್ಯವಾಗಿ ಅಲೆಯದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ‘ಪಂಚಮಿತ್ರ ವ್ಯಾಟ್ಸಪ್ ಚಾಟ್’ ಮತ್ತು ‘ಪಂಚಮಿತ್ರ ಪೋರ್ಟಲ್’ ಆರಂಭಿಸಿದೆ. ಈ ವೇದಿಕೆಗಳ ಮುಖಾಂತರ ಗ್ರಾಮ ಪಂಚಾಯತಿಯಲ್ಲಿ ದೊರೆಯುವ ಹಲವು ಸೇವೆಗಳನ್ನು ಕೂತಲ್ಲೇ ಪಡೆಯಬಹುದಾಗಿದೆ.

ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯವು ಈ ಹೊಸ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಮುಂದೆ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಇಲಾಖೆಗೆ (Rural development) ಸಂಬ೦ಧಿಸಿದ೦ತೆ ಬೇರೆ ಬೇರೆ ಇಲಾಖೆಗಳ ಆಯ್ದು ಸೇವೆಗಳನ್ನು ವಾಟ್ಸಾಪ್ ಚಾಟ್ ಮುಖಾಂತರವೇ ಪಡೆಯಬಹುದಾಗಿದೆ.

ಯಾವೆಲ್ಲ ಸೇವೆಗಳು ಸಿಗಲಿವೆ?

ಗ್ರಾಮ ಪಂಚಾಯಿತಿಗೆ ಸಂಬ೦ಧಿಸಿದ೦ತೆ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆ ಸಂಬAಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳು ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವಾಟ್ಸಪ್ ಚಾಟ್ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿವೆ. ಈ ಡಿಜಿಟಲ್ ವೇದಿಕೆಗಳ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿರುವ ಪ್ರಮುಖ ಸೇವೆಗಳ ವಿವರ ಕೆಳಗಿನಂತಿದೆ:

  • ಕಟ್ಟಡ ನಿರ್ಮಾಣ ಪರವಾನಗಿ
  • ಹೊಸ ನೀರು ಪೂರೈಕೆ ಸಂಪರ್ಕ
  • ನೀರು ಸರಬರಾಜಿನ ಸಂಪರ್ಕ ಕಡಿತ
  • ಕುಡಿಯುವ ನೀರಿನ ನಿರ್ವಹಣೆ
  • ಬೀದಿ ದೀಪದ ನಿರ್ವಹಣೆ
  • ಗ್ರಾಮ ನೈರ್ಮಲ್ಯ ನಿರ್ವಹಣೆ
  • ಉದ್ದಿಮೆ ಪರವಾನಗಿ
  • ಸ್ವಾಧೀನ ಪ್ರಮಾಣ ಪತ್ರ
  • ನಾನಾ ಸೇವೆ ಸಂಬ೦ಧ ರಸ್ತೆ ಅಗೆತಕ್ಕೆ ಅನುಮತಿ
  • ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
  • ನಿರಾಕ್ಷೇಪಣಾ ಪತ್ರ
  • ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ
  • ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು
  • ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ
  • ಹೊಸ/ ಅಸ್ತಿತ್ವದಲ್ಲಿರುವ ಓವರ್ ಗ್ರೇಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ
  • ಜತೆಗೆ ನಮೂನೆ 9/11ಎ, ನಮೂನೆ 11ಬಿ

ಕೂತಲ್ಲೇ ಕುಂದು ಕೊರತೆಗಳಿಗೆ ಪರಿಹಾರ

ಹೌದು, ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವ್ಯಾಟ್ಸಪ್ ಚಾಟ್ ಮುಖಾಂತರ ಸರ್ಕಾರಿ ಸೇವೆಗಳನ್ನು ಪಡೆಯುವುದು ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಸೇವೆಗಳಿಗೆ ಸಂಬ೦ಧಿಸಿದ೦ತೆ ಯಾವುದೇ ರೀತಿಯ ಕುಂದು ಕೊರತೆಗಳ ಕುರಿತಂತೆ ದೂರು ಸಲ್ಲಿಸಿ ಪರಿಹಾರವನ್ನು ಕೂಡ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಕುಡಿಯುವ ನೀರಿನ ಕೊರತೆ, ರಸ್ತೆ ಮತ್ತು ಸೇತುವೆ ದುರಸ್ತಿ, ನರೇಗಾ ಯೋಜನೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬ೦ಧಿಸಿದ೦ತೆ ವಿವಿಧ 39 ರೀತಿಯ ಕುಂದುಕೊರತೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇತರೆ ಮಾಹಿತಿಗಳು ಕೂಡಾ ಲಭ್ಯ

ಮೇಲ್ಕಾಣಿಸಿದ ವಿವಿಧ 89 ಸರಕಾರಿ ಸೇವೆಗಳ ಜೊತೆಗೆ ನಿಮ್ಮೂರ ಗ್ರಾಮ ಪಂಚಾಯಿತಿಗೆ ಸಂಬ೦ಧಿಸಿದ೦ತೆ ಈ ಮಾಹಿತಿಗಳನ್ನು ಕೂಡ ಸುಲಭವಾಗಿ ಪಡೆಯಬಹುದಾಗಿದೆ.

  • ಗ್ರಾಮ ಪಂಚಾಯಿತಿಗೆ ಚುನಾಯಿತ ಪ್ರತಿನಿಧಿಗಳ ವಿವರ ಹಾಗೂ ಸಿಬ್ಬಂದಿಗಳ ವಿವರ
  • ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುವ ಸಭೆಗಳ ವಿವರಗಳ ಮತ್ತು ನಡಾವಳಿಗಳು
  • ಗ್ರಾಮ ಪಂಚಾಯಿತಿಯಲ್ಲಿ ನಡೆಸುವ ಮುಂಬರುವ ಸಭೆಗಳ ಮಾಹಿತಿ
  • ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ಆದಾಯ ಮಾಹಿತಿ ಮತ್ತು ಸೇವೆಗಳ ವಿವರ
  • ಸ್ವಸಹಾಯ ಗುಂಪಿಗೆ ಸಂಬ೦ಧಿಸಿದ ಮಾಹಿತಿಗಳು ಮತ್ತು ಗ್ರಾಮ ಪಂಚಾಯತ್ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳು

ವಾಟ್ಸಪ್ ಚಾಟ್‌ನಲ್ಲಿ ಸೇವೆ ಪಡೆಯುವುದು ಹೇಗೆ?

ಹಂತ 1: ರಾಜ್ಯ ಸರ್ಕಾರದ ‘ಪಂಚಮಿತ್ರ ವಾಟ್ಸಪ್ ಚಾಟ್’ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ಸೇವೆಗಳನ್ನು ಪಡೆಯಲು 82775 06000 ವಾಟ್ಸಪ್ ನಂಬರಿಗೆ ಮೊದಲು ‘ಹಾಯ್’ (Hi) ಎಂಬ ಸಂದೇಶ ಕಳುಹಿಸಿ.

ಹಂತ 2: ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಸುಲಭ ಸಂವಹನಕ್ಕೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದೆ ಕೇಳಲಾಗುವ ನಿಮ್ಮ ಜಿಲ್ಲಾ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 3: ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡ ನಂತರ, ನಿಮಗೆ ಬೇಕಾಗಿರುವ ಸೇವೆ ಮಾಹಿತಿ ಅಥವಾ ಕುಂದು ಕೊರತೆಯನ್ನು ಆಯ್ಕೆ ಮಾಡಿಕೊಂಡು ಇದರ ಲಾಭ ಪಡೆಯಬಹುದು.

ವಾಟ್ಸಾಪ್ ನಂಬರ್ : 82775 06000

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!