ಸರಕಾರಿ ಯೋಜನೆ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

PM Surya Ghar Muft Bijli Jojana 2024 : ಬಡವರ ಮೇಲಿನ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಲು ಹಾಗೂ ಸೋಲಾರ್ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ಸುಮಾರು 75,000 ಕೋಟಿಗೂ ಅಧಿಕ ಹಣವನ್ನು ವೆಚ್ಚ ಮಾಡಿ ಕೇಂದ್ರ ಸರಕಾರವು ‘ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ಯನ್ನು (PM – Surya Ghar Muft Bijli Jojana) ಜಾರಿಗೊಳಿಸಲಾಗಿದೆ. ಪ್ರಧಾನ ಮಂತ್ರಿ ಸೂರ್ಯದ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕಳೆದ ಫೆಬ್ರವರಿ 13, 2024ರಂದು ಜಾರಿಗೆ ಬಂದಿರುವ ಈ ಯೋಜನೆಯು ಭಾರತದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಜೊತೆಗೆ ದೇಶದ ಜನರ ವಿದ್ಯುತ್ ಬಿಲ್ ನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. 2024-25ನೇ ಸಾಲಿನಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ದೊರಕಲು 10 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹತೆಗಳೇನು, ಯೋಜನೆಯ ಲಾಭಗಳೇನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: Village accountant recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅಧಿಕೃತ ಅಧಿಸೂಚನೆ ಬಿಡುಗಡೆ | 1000 ಹುದ್ದೆಗಳು

ಈ ಯೋಜನೆಗೆ ಯಾರೆಲ್ಲ ಅರ್ಹರು?

 • ಅರ್ಜಿ ಸಲ್ಲಿಸುವ ಅಭ್ಯರ್ಥಿಯು 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಯಾಗಿರಬೇಕು. ಕುಟುಂಬದ ವಾರ್ಷಿಕ ವರಮಾನವು 1.5 ಲಕ್ಷ ರೂಪಾಯಿ ಮೇಲಿರಬಾರದು.
 • ಅರ್ಜಿದಾರನ ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ವಂತ ಮನೆ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.
 • ಬ್ಯಾಂಕ್ ಖಾತೆಯು ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು. ಡಿಸ್ಕಾಂ ನಿಂದ ಒಪ್ಪಿಗೆ ಸಿಕ್ಕ ನಂತರ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ.

ಯೋಜನೆಯ ಲಾಭಗಳು

 • ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ತಮ್ಮ ಸ್ವಂತ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರದ ಸಾಲವನ್ನು ನೀಡಲಾಗುವುದು.
 • ಫಲಾನುಭವಿಗಳ ಮನೆ ಮೇಲ್ಚಾವಣಿಯ ಮೇಲೆ ಗರಿಷ್ಟ 10 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಬೇಕಾಗಿರುವ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಸೌಲಭ್ಯ ಒದಗಿಸಲಿದೆ.
 • ಮೊದಲ 3 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಶೇ.40 ಮತ್ತು ನಂತರದ ವಿದ್ಯುತ್ ಉತ್ಪಾದನೆಗೆ ಶೇ.20ರಷ್ಟು ಸಬ್ಸಿಡಿಯನ್ನು ಸರ್ಕಾರವು ಒದಗಿಸಲಿದೆ.
 • ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್ ಬಿಲ್ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗಲಿದೆ.
  ಐದು ವರ್ಷಗಳ ನಿರ್ವಹಣಾ ಗ್ಯಾರಂಟಿಯನ್ನು (Maintenance guarantee) ಕೂಡ ನೀಡಲಾಗುತ್ತದೆ. ಒಂದು ವೇಳೆ ಅಗತ್ಯತೆಗಿಂತ ಹೆಚ್ಚುವರಿ ವಿದ್ಯುತ್ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದು.

ಇದನ್ನೂ ಓದಿ: Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲಾತಿಗಳು

 1. ಮೊಬೈಲ್ ನಂಬರ್
 2. ಅರ್ಜಿದಾರನ ಆಧಾರ್ ಕಾರ್ಡ್
 3. ರೇಷನ್ ಕಾರ್ಡ್
 4. ವೋಟರ್ ಐಡಿ
 5. ಪ್ಯಾನ್ ಕಾರ್ಡ್
 6. ಕಳೆದ ಆರು ತಿಂಗಳ ವಿದ್ಯುತ್ ಬಿಲ್
 7. ಅರ್ಜಿದಾರರ ಭಾವಚಿತ್ರ
 8. ಬ್ಯಾಂಕ್ ಪಾಸ್ ಬುಕ್
 9. ಆದಾಯ ಪ್ರಮಾಣ ಪತ್ರ ಹಾಗೂ ವಿಳಾಸ ದೃಢೀಕರಣ ಪತ್ರ
 10. ಮನೆಗೆ ಸಂಬ೦ಧಿಸಿದ ದಾಖಲೆಗಳು

ಇದನ್ನೂ ಓದಿ: Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ಅರ್ಜಿ ಹೇಗೆ ಸಲ್ಲಿಸಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಕೆಳಗೆ ತಿಳಿಸಿರುವ ವಿಧಾನಗಳನ್ನು ಬಳಸಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು 👉 ಇಲ್ಲಿ ಕ್ಲಿಕ್ ಮಾಡಿ.

 • PM – SURYA GHAR: MUFT BIJLI YOJANA National Portal ತೆರೆದುಕೊಳ್ಳುತ್ತದೆ. ಹೋಂ ಪೇಜ್‌ನಲ್ಲಿ ಕಾಣುವ ‘ಂಠಿಠಿಟಥಿ ಜಿoಡಿ ಡಿooಜಿಣoಠಿ’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
 • ನಂತರ ಅಲ್ಲಿ ಕೇಳಲಾಗುವ ಅರ್ಜಿದಾರನಿಗೆ ಸಂಬAಧಿಸಿದ ಮಾಹಿತಿಯನ್ನು ನಮೂದಿಸಬೇಕು. ಬಳಿಕ ಅಲ್ಲಿ ಕಾಣುವ ನೆಕ್ಸ್ಟ್ ಎಂಬ ಆಯ್ಕೆಯನ್ನು ಒತ್ತಿದರೆ ರೆಜಿಸ್ಟ್ರೇಷನ್ ಪೇಜ್ ತೆಗೆದುಕೊಳ್ಳಲಾಗುವುದು.
 • ರಿಜಿಸ್ಟ್ರೇಷನ್ ಪೇಜ್’ನಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
 • ಅರ್ಜಿ ಸಲ್ಲಿಕೆಯ ಬಳಿಕ ವಿದ್ಯುತ್ ಸರಬರಾಜು ಕಂಪನಿಯಿ೦ದ ಅನುಮೋದನೆ ಬಂದ ನಂತರ ಗ್ರಾಹಕರಿಂದ ಪ್ಲಾಂಟ್ ಪಡೆದು ಅಳವಡಿಸಿಕೊಳ್ಳಬೇಕು.
 • ಪ್ಲಾಂಟ್ ಅಳವಡಿಸಿಕೊಂಡ ನಂತರ ಸಂಬ೦ಧಿಸಿದ ಮಾಹಿತಿಯನ್ನು ಸಬ್ಮಿಟ್ ಮಾಡಿ ನೆಟ್ ಮೀಟರಗೆ ಅರ್ಜಿ ಸಲ್ಲಿಸಬೇಕು.
 • ನೆಟ್ ಮೀಟರ್ ಅಳವಡಿಸಿಕೊಂಡ ನಂತರ ವಿದ್ಯುತ್ ಸರಬರಾಜು ಕಂಪನಿ ಅವರು ತಪಾಸಣೆ ನಡೆಸಿ ಪ್ರಮಾಣ ಪತ್ರವನ್ನು ನೀಡುತ್ತಾರೆ.
 • ಪ್ರಮಾಣ ಪತ್ರ ದೊರೆತ ನಂತರ ಬ್ಯಾಂಕ್ ಖಾತೆ ವಿವರ ಹಾಗೂ ರದ್ದಾದ ಚೆಕ್ ಅನ್ನು ವೆಬ್‌ಸೈಟ್ ಮುಖಾಂತರ ಸಬ್ಮಿಟ್ ಮಾಡಿದರೆ, ಅರ್ಜಿದಾರನ ಖಾತೆಗೆ 30 ದಿನಗಳ ಒಳಗಾಗಿ ಸಬ್ಸಿಡಿ ಹಣ ಜಮೆಯಾಗುತ್ತದೆ.

ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: Apply ಮಾಡಿ

Labour card Registration 2024 : ಲೇಬರ್ ಕಾರ್ಡ್ ನೋಂದಣಿ ಆರಂಭ | ಈ ಕಾರ್ಡ್ ಇದ್ರೆ ಕುಟುಂಬದ ಎಲ್ಲರಿಗೂ ಉಚಿತ ಸೌಲಭ್ಯ

WhatsApp Group Join Now
Telegram Group Join Now

Related Posts

error: Content is protected !!