ಸರಕಾರಿ ಯೋಜನೆಸುದ್ದಿಗಳು

ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ PM Vishwakarma Scheme free tool kit

WhatsApp Group Join Now
Telegram Group Join Now

PM Vishwakarma Scheme free tool kit : ಕೇಂದ್ರ ಸರಕಾರ 15,000 ರೂಪಾಯಿ ಬೆಲೆಯ ಉಚಿತ ಟೂಲ್ ಕಿಟ್ / ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕೇಂದರ ಸರಕಾರವು ವಿಶ್ವಕರ್ಮ ಜಯಂತಿಯ ಸ್ಮರಣಾರ್ಥವಾಗಿ ಸಣ್ಣ ಉದ್ಯೋಗಿಗಳು ಮತ್ತು ನುರಿತ ಕುಶಲಕರ್ಮಿಗಳಿಗೆ ತರಬೇತಿ, ಕೌಶಲ್ಯ ವಿಷಯಗಳ ಕುರಿತು ಸಲಹೆ ಮತ್ತು ಆಧುನಿಕ ತಂತ್ರಗಳ (Modern technology) ಜ್ಞಾನದ ಜೊತೆಗೆ ನಗದು ಬೆಂಬಲವನ್ನು ನೀಡುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ.

ಸದರಿ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಬೇರೆ ಬೇರೆ ವರ್ಗದ ಒಟ್ಟು 18 ವಿಧದ ಕುಶಲಕರ್ಮಿಗಳಿಗೆ ರಾಜ್ಯಗಳಲ್ಲಿರುವ ವಿವಿಧ ಕೌಶಲ್ಯ ತರಬೇತಿ ಕೇಂದ್ರಗಳ ಮುಖಾಂತರ ತರಬೇತಿಯ ಜೊತೆಗೆ 15,000 ರೂಪಾಯಿ ಮೌಲ್ಯದ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರವನ್ನು ನೀಡಲಾಗುತ್ತ್ತಿದೆ.

ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು Coconut Farming

ಉಚಿತ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ ಪಡೆಯಲು ಏನು ಮಾಡಬೇಕು?

ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಅರ್ಹತೆಗಳನ್ನು ಪರಿಶೀಲಿಕೊಳ್ಳಬೇಕು. ನೀವು ಅರ್ಹರಿದ್ದರೆ, ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸಂಬ೦ಧಿಸಿದ ಇಲಾಖೆ ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತದೆ.

ಅರ್ಹರಾದ ಫಲಾನುಭವಿಗಳಿಗೆ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ ಖರೀದಿ ಮಾಡಲು ಈ ಯೋಜನೆಯ ಅಡಿಯಲ್ಲಿ 15,000 ರೂಪಾಯಿ ಮೌಲ್ಯದ ಇ-ವೋಚರ್ಸ್ / ಇ-ರೂಪಿಯನ್ನು ಬ್ಯಾಂಕ್ ಮುಖಾಂತರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ.

PM Vishwakarma Scheme free tool kit

ಇದನ್ನೂ ಓದಿ: ರೈತರ ಖಾತೆಗೆ ಮುಂಗಾರು ಬೆಳೆ ವಿಮೆ ಪರಿಹಾರ | ಕೃಷಿ ಸಚಿವರ ಸೂಚನೆ 2023 Khariff Crop Insurance Settlement

ತರಬೇತಿ ವಿವರ (PM Vishwakarma yojana training)

ಪಿ ಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ 15,000 ರೂಪಾಯಿ ಮೌಲ್ಯದ ಟೂಲ್ ಕಿಟ್ ಜೊತೆಗೆ ಸಂಬAಧಿಸಿದ ಇಲಾಖೆಯಿಂದ 5 ರಿಂದ 15 ದಿನದ ವರೆಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿರಬಾರದು. ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಈ ಯೋಜನೆಯಡಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಳೆದ 5 ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಪಡೆದಿರಬಾರದು.

ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra (KVP) Post Office Savings Scheme

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಅರ್ಜಿದಾರನ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಗ್ರಾಮ ಪಂಚಾಯತಿಯಿ೦ದ ಪಡೆದ ಸ್ವ-ಉದ್ಯೋಗ ಪ್ರಮಾಣ ಪತ್ರ (self employed certificate)
  • ಅರ್ಜಿದಾರನ ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಹರಿರುವ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರವಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಭೇಟಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆಗೆ ಕಡಿಮೆ ಬಡ್ಡಿ ₹3 ಲಕ್ಷ ಸಾಲ | ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಅಭಿಯಾನ Kisan Credit Card Loan

WhatsApp Group Join Now
Telegram Group Join Now

Related Posts

error: Content is protected !!