Ration Card Correction Karnataka : ರೇಷನ್ ಕಾರ್ಡ್ ತಿದ್ದುಪಡಿ
ಜನವರಿ 31ರ ವರೆಗೂ ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ
ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಜನವರಿ 31ರ ವರೆಗೂ ಮತ್ತೆ ಕಾಲಾವಕಾಶ ವಿಸ್ತರಣೆ ಮಾಡಿದ್ದು; ತಿದ್ದುಪಡಿ ಅಗತ್ಯವಿರುವ ಪಡಿತರ ಚೀಟಿದಾರರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ತಿದ್ದಪಡಿ ದಿನಾಂಕ ಮತ್ತು ಅವಧಿ
ಪಡಿತರ ಚೀಟಿ ತಿದ್ದುಪಡಿಗೆ ಈ ಹಿಂದೆ 2024ನೇ ಸಾಲಿನ ಡಿಸೆಂಬರ್ 31ರ ವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ವಿಸ್ತರಿಸಲಾಗಿದ್ದು; ಪಡಿತರ ಚೀಟಿ ತಿದ್ದುಪಡಿ ಅವಧಿಯು 2025ನೇ ಸಾಲಿನ ಜನವರಿ ತಿಂಗಳ 31ರ ವರೆಗೆ ಇರಲಿದೆ.
ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿ (Grama One Center), ಬೆಂಗಳೂರು ಒನ್ (Bangalore One) ಹಾಗೂ ಕರ್ನಾಟಕ ಒನ್ (karnataka One) ಸೇವಾ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಏನೆಲ್ಲ ತಿದ್ದುಪಡಿ ಮಾಡಿಕೊಳ್ಳಬಹುದು?
- ಹೊಸ ಸದಸ್ಯರ ಸೇರ್ಪಡೆ
- ಹೆಸರು ತೆಗೆದು ಹಾಕುವುದು
- ಹೆಸರು ತಿದ್ದುಪಡಿ ಮಾಡುವುದು
- ಫೋಟೋ ಬದಲಾವಣೆ
- ನ್ಯಾಯ ಬೆಲೆ ಅಂಗಡಿ ಬದಲಾವಣೆ
- ಕುಟುಂಬ ಮುಖ್ಯಸ್ತರ ಬದಲಾವಣೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಪಡಿತರ ಚೀಟಿಯ ಮೂಲ ದಾಖಲೆ
- ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್
- ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಕಾರ್ಡ್
- ಗಂಡನ ಮನೆಯ ಪಡಿತರ ಚೀಟಿ ಪ್ರತಿ
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ | ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ
ಹೊಸ ರೇಷನ್ ಕಾರ್ಡ್’ಗೆ ಅರ್ಜಿ
ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸಾವಿರಾರು ಮಂದಿ ಕಾಯುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಶೀಘ್ರವೇ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸ್ವೀಕರಿಸಲು ಶೀಘ್ರವೇ ಆನ್‌ಲೈನ್ ವ್ಯವಸ್ಥೆ ಪ್ರಾರಂಭಿಸಲಿದೆ ಎನ್ನಲಾಗುತ್ತಿದೆ.
ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಸೇರಿ ಎಲ್ಲ ವಿಧದÀ ಪಡಿತರ ಚೀಟಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಲಿದ್ದು; ಸಂಬAಧಿಸಿದ ದಾಖಲಾತಿಗಳೊಂದಿಗೆ ಆಹಾರ ಇಲಾಖೆಯ https://ahara.karnataka.gov.in/ ವೆಬ್‌ಸೈಟ್ ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..