ಸುಪ್ರೀಂ ಕೋರ್ಟ್ (Supreme Court of India) ಲಾ ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 90 ಹುದ್ದೆಗಳ ನೇಮಕಾತಿ ನಡೆಯಲಿದ್ದು; ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 7ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕಾನೂನು ಪದವೀಧರರಾಗಿರಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾದಿAದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿAದ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಒಂದು ವೇಳೆ ಅಭ್ಯರ್ಥಿಗಳು ಲಾ ಕೋರ್ಸ್ನ ಐದನೇ ವರ್ಷದಲ್ಲಿದ್ದರೆ ಅಥವಾ ಕಾನೂನು ಪದವಿಯ ಮೂರನೇ ವರ್ಷದಲ್ಲಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ನೇಮಕಾತಿಗೆ ಮೊದಲು ಇದಕ್ಕೆ ಸಂಬAಧಿಸಿದ ನಿಗದಿತ ವಿದ್ಯಾರ್ಹತೆಯ ಪ್ರಮಾಣ ಪತ್ರ ಸಲ್ಲಿಸಿರಬೇಕು.
ಅಭ್ಯರ್ಥಿಗಳು ರಿಸರ್ಚ್, ಅನಾಲಿಟಿಕಲ್ ಸ್ಕಿಲ್, ಕಂಪ್ಯೂಟರ್ ಜ್ಞಾನ ಸೇರಿದಂತೆ ತಮ್ಮ ಹುದ್ದೆಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಿರಬೇಕು. ಇನ್ನು ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: Canara Bank Recruitment 2025 : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
ಅರ್ಜಿ ಶುಲ್ಕವೆಷ್ಟು?
ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಜತೆಗೆ ಬ್ಯಾಂಕ್ ಶುಲ್ಕ ಕೂಡ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಯುಕೋ ಬ್ಯಾಂಕ್ ಲಿಂಕ್ ಬಳಸಿಕೊಂಡು ಆನ್‌ಲೈನ್’ನಲ್ಲಿ ಪಾವತಿಸಬೇಕು.
ಆಯ್ಕೆ ಪ್ರಕ್ರಿಯರ ಹೇಗೆ?
ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮಾರ್ಚ್ 9ರಂದು ಪರೀಕ್ಷೆ ನಿಗದಿಯಾಗಿದೆ. ಮೊದಲನೆ ಹಂತದ ಪರೀಕ್ಷೆಯು ಆನ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ಬಹು ಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಆಫ್‌ಲೈನ್’ನಲ್ಲಿ 2ನೇ ಹಂತದ ಪರೀಕ್ಷೆ ನಡೆಯಲಿದೆ.
ಇದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗಳ ಕೀ ಉತ್ತರಗಳನ್ನು ಮಾರ್ಚ್ 10ರಂದು ಪ್ರಕಟಿಸಿ, ಆಕ್ಷೇಪಣೆಗೆ ಒಂದು ದಿನ ಸಮಯ ನೀಡಲಾಗುತ್ತದೆ. ಅಭ್ಯರ್ಥಿಗಳು ಪ್ರತಿ ಆಕ್ಷೇಪಣೆಗೆ 100 ರೂ. ಶುಲ್ಕ ಪಾವತಿಸಿ ಮಾರ್ಚ್ 11ರ ರಾತ್ರಿ 11.59ರೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.
ಇದನ್ನೂ ಓದಿ: LIC BIMA SAKHI Scheme : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ಉದ್ಯೋಗ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14-01-2025
- ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 07-02-2025
- ಪರೀಕ್ಷೆ ನಡೆಯುವ ದಿನಾಂಕ : 09-03-2025
ಅಧಿಸೂಚನೆ : Download
ಅರ್ಜಿ ಲಿಂಕ್ : Apply Now
ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ