Atal Pension Scheme (APY) : ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬೇಕೆ? | ಕೂಡಲೇ ಅಟಲ್ ಪಿಂಚಣಿ ಯೋಜನೆಯಡಿ ಈ ಕೆಲಸ ಮಾಡಿ…
ಬದುಕಿನ ಇಳಿಗಾಲದಲ್ಲಿ ಭದ್ರತೆ ಒದಗಿಸುವ ಈ ಯೋಜನೆಯಡಿ ಕನಿಷ್ಟ ಮೊತ್ತ ಹೂಡಿಕೆ ಮಾಡಿ ಗರಿಷ್ಟ ಮಾಸಿಕ ಪಿಂಚಣಿ ಪಡೆಯಬಹುದು. ಪಿಂಚಣಿ ಯೋಜನೆಗಳ ಪೈಕಿ ‘ಅಟಲ್ ಪೆನ್ಶನ್ ಯೋಜನೆ’ಯಲ್ಲಿ (Atal Pension Yojana) ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಲು ಏನು ಮಾಡಬೇಕು? ಎಂಬ ವಿವರವನ್ನು ಇಲ್ಲಿ ನೋಡೋಣ…
ಏನಿದು ಅಟಲ್ ಪೆನ್ಶನ್ ಯೋಜನೆ?
ಇದೊಂದು ಸಾಮಾಜಿಕ ಭದ್ರತಾ ಯೋಜನೆ. ಸಂಕ್ಷಿಪ್ತಾರ್ಥದಲ್ಲಿ ಎಪಿವೈ ಎಂದು ಕರೆಯಲ್ಪಡುವ ಅಟಲ್ ಪೆನ್ಶನ್ ಯೋಜನೆಯನ್ನು (Atal Pension Yojana-APY) ಕೇಂದ್ರ ಸರ್ಕಾರವು 2015ರಲ್ಲಿ ಪರಿಚಯಿಸಿದೆ. ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ಖಾತರಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (Pension Fund Regulatory and Development Authority – PFRDA) ಸಂಸ್ಥೆ ಈ ಪೆನ್ಶನ್ ಸ್ಕೀಮ್ ನಿರ್ವಹಿಸುತ್ತದೆ.ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಅಟಲ್ ಪಿಂಚಣಿ ಸ್ಕೀಮ್ ಅನ್ನು 79 ಲಕ್ಷ ಮಂದಿ ಪಡೆದಿದ್ದು; ಈ ಪಿಂಚಣಿ ಸ್ಕೀಮ್ ಪಡೆದ ಫಲಾನುಭವಿಗಳ ಸಂಖ್ಯೆ 6 ಕೋಟಿ ದಾಟಿದೆ.
ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ
ಈ ಯೋಜನೆಗೆ ಯಾರೆಲ್ಲ ಅರ್ಹರು?
ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ 18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು.
ಈ ಯೋಜನೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ಗಳಲ್ಲಿ ಪಡೆಯಬಹುದಾಗಿದ್ದು; ಅಗತ್ಯವಾಗಿ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಆದಾಯ ಪ್ರಮಾಣಪತ್ರ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಇತ್ಯಾದಿ ಕೆಲವು ದಾಖಲೆಗಳನ್ನು ಸಲ್ಲಿಸಿದರೆ ಯೋಜನೆಯ ಖಾತೆ ತೆರೆಯಬಹುದು.
ವಾಟ್ಸಾಪ್ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್ಗೆ ‘ಹಾಯ್’ ಅಂತ ಕಳಿಸಿ..
ಪ್ರತಿ ತಿಂಗಳು 5000 ರೂಪಾಯಿ ಪಡೆಯಲು ಏನು ಮಾಡಬೇಕು?
1000 ರೂಪಾಯಿಂದ ಹಿಡಿದು 5000 ರೂಪಾಯಿ ವರೆಗೂ ಪಿಂಚಣಿ ತರುವ ವಿವಿಧ ಪ್ಲಾನ್ಗಳನ್ನು ಎಪಿವೈ ಸ್ಕೀಮ್’ನಲ್ಲಿವೆ. ಪ್ರತಿ ತಿಂಗಳು 1,000 ರೂಪಾಯಿ, 2,000 ರೂಪಾಯಿ, 3,000 ರೂಪಾಯಿ, 4,000 ರೂಪಾಯಿ ಅಥವಾ 5,000 ರೂಪಾಯಿ ಪಡೆಯುವ ಆಯ್ಕೆ ಇದರಲ್ಲಿದೆ. ಆರಂಭದಲ್ಲೇ ನಿಮ್ಮ ಅರ್ಹತೆಗೆ ಅನುಗುಣವಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕು.
ನಿಗದಿತ ಹಣ ಕಟ್ಟುತ್ತಾ ಹೋದರೆ 60ನೇ ವಯಸ್ಸಿನ ಬಳಿಕ ನೀವು ಆಯ್ಕೆ ಮಾಡಿದಷ್ಟು ಮಾಸಿಕ ಪಿಂಚಣಿ ಶುರುವಾಗುತ್ತದೆ. 18ನೇ ವಯಸ್ಸಿನಲ್ಲಿ ಅಟಲ್ ಪೆನ್ಶನ್ ಸ್ಕೀಮ್ ಅನ್ನು ಆರಂಭಿಸಿ, ಪ್ರತೀ ತಿಂಗಳು 42 ರೂಪಾಯಿ ಕಟ್ಟುತ್ತಾ ಹೋದರೆ 1,000 ರೂಪಾಯಿ ಪಿಂಚಣಿ ಬರುತ್ತದೆ. 5,000 ರೂಪಾಯಿ ಪಿಂಚಣಿ ಬೇಕೆಂದರೆ 18ನೇ ವಯಸ್ಸಿನಿಂದ ಪ್ರತೀ ತಿಂಗಳು 210 ರೂಪಾಯಿ ಪಾವತಿಸುತ್ತಾ ಹೋಗಬೇಕು.
ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ
40ನೇ ವಯಸ್ಸಿಗೆ ಆರಂಭಿಸುವುದಾದರೆ…
ಈಗಾಗಲೇ ನೀವು 40ರ ಹತ್ತಿರ ಅಥವಾ 40ನೇ ವಯಸ್ಸಿಗೆ ಕಾಲಿಟ್ಟಿದ್ದರೆ, ಪ್ರತಿ ತಿಂಗಳು ಪಾವತಿಸಬೇಕಾದ ಮೊತ್ತ ಹಾಗೂ 60ರ ನಂತರ ಸಿಗಲಿರುವ ವಿವಿಧ ಹಂತದ ಮಾಸಿಕ ಪಿಂಚಣಿ ವಿವರ ಈ ಕೆಳಗಿನಂತಿದೆ:
- ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 291 ರೂಪಾಯಿ
- ತಿಂಗಳಿಗೆ 2,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 582 ರೂಪಾಯಿ
- ತಿಂಗಳಿಗೆ 3,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 873 ರೂಪಾಯಿ
- ತಿಂಗಳಿಗೆ 4,000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 1,164 ರೂಪಾಯಿ
ಪಾವತಿ ಹೇಗೆ?
ಅಟಲ್ ಪಿಂಚಣಿ ಯೋಜನೆಯ ಚಂದಾದಾರರು ಮಾಸಿಕ ಪಾವತಿಯನ್ನು ಪ್ರತಿ ತಿಂಗಳು ಪಾವತಿಸಬೇಕು ಎಂಬ ನಿಯಮವೇನಿಲ್ಲ. ಸಾಮರ್ಥ್ಯ ಇರುವವರು ಪ್ರತಿ ತಿಂಗಳು ಪಾವತಿಸಬಹುದು. ಮೂರು ತಿಂಗಳು ಅಥವಾ ಆರು ತಿಂಗಳಿಗೊಮ್ಮೆಯೂ ಕೂಡ ಪಾವತಿಸಲು ಅವಕಾಶವಿದೆ.
ಒಂದುವೇಳೆ ಚಂದಾದಾರರು 60ನೇ ವಯಸ್ಸಿಗಿಂತ ಮೊದಲು ಮರಣ ಹೊಂದಿದರೆ ಚಂದಾದಾರರ ಸಂಗಾತಿಯು ಕೊನೆಯ ವರೆಗೆ ಪಿಂಚಣಿ ಹಣವನ್ನು ಪಡೆಯಬಹುದು. ಇಬ್ಬರೂ (ಚಂದಾದಾರರು ಮತ್ತು ಸಂಗಾತಿ) ಮರಣದ ಹೊಂದಿದರೆ ಪಿಂಚಣಿ ಹಣ ಅವರ ನಾಮಿನಿಗೆ ಒದಗಿಸಲಾಗುತ್ತದೆ.
ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ…