ಸಾಲ ಯೋಜನೆಹಣಕಾಸು

Agricultural Loans : ಬರಗಾಲದಲ್ಲಿ ರೈತರ ಕೈ ಹಿಡಿಯುತ್ತಾ ಶೂನ್ಯಬಡ್ಡಿ ಕೃಷಿ ಸಾಲ? ನಿರೀಕ್ಷೆ ಹೆಚ್ಚಿಸಿದ ಸೊಸೈಟಿ ಲೋನ್

WhatsApp Group Join Now
Telegram Group Join Now

Agricultural Loans : ರಾಜ್ಯದಲ್ಲಿ ವ್ಯಾಪಕವಾಗಿ ಬಿಗಡಾಯಿಸಿರುವ ‘ಬರಗಾಲ’ ರೈತರನ್ನು ಕಂಗಾಲು ಮಾಡಿದೆ. ಬರ ಪರಿಹಾರದ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಕೆಸರೆರಚಾಟ ನಡೆಯುತ್ತಿದ್ದು; ಏತನ್ಮಧ್ಯೆ ಲೋಕಸಭಾ ಚುನಾವಣೆ ನಿಮಿತ್ತ ರೈತರ ನಿಜವಾದ ಸಂಕಷ್ಟಕ್ಕೆ ಸ್ಪಂದಿಸುವ ವ್ಯವದಾನ ಜನಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿ ಬರದಿಂದ ಕಂಗೆಟ್ಟಿರುವ ಅನ್ನದಾತರು ಸಾಲವನ್ನೇ ನೆಚ್ಚಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿದ ಶೂನ್ಯಬಡ್ಡಿ ಸಾಲ ಮಿತಿ

ದೊಡ್ಡ ಭರವಸೆ ಎಂದರೆ ರೈತರಿಗೆ ಡಿಸಿಸಿ ಬ್ಯಾಂಕಿನಿAದ ಶೂನ್ಯ ಬಡ್ಡಿದರದಲ್ಲಿ ಸಿಗುತ್ತಿದ್ದ 3 ಲಕ್ಷ ರೂಪಾಯಿ ವರೆಗಿನ ಸಾಲದ ಮಿತಿಯನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈಚೆಗೆ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲೂ ಇದು ಪ್ರಮುಖಾಂಶವಾಗಿದ್ದು; ಕಳೆದ 2023ರ ಆಗಸ್ಟ್ 1ರಿಂದಲೇ ಸಾಲಮಿತಿ ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಆದರೆ, ಕೆಲವು ತಾಂತ್ರಿಕ ತೊಡಕಿನಿಂದಾಗಿ ಘೋಷಣೆಯಾದ ಮೊದಲ ವರ್ಷ ಅನೇಕ ರೈತರಿಗೆ 5 ಲಕ್ಷ ರೂಪಾಯಿ ಸಾಲ ಲಭ್ಯವಾಗಿಲ್ಲ. ಸಹಕಾರ ಬ್ಯಾಂಕುಗಳು ಮತ್ತು ಸರಕಾರದ ನಡುವಿನ ಹೊಂದಾಣಿಕೆಯ ಕಾರಣಕ್ಕೆ 5 ಲಕ್ಷ ರೂಪಾಯಿ ಬಡ್ಡರಹಿತ ಸಾಲ ಸಿಕ್ಕಿಲ್ಲ. ಈ ವರ್ಷ ಬರಗಾಲಕ್ಕೆ ಈ ಸಾಲ ನೆರವಾದೀತಾ? ಎಂಬ ನಿರೀಕ್ಷೆ ರೈತರಲ್ಲಿ ಹೆಚ್ಚುತ್ತಿದೆ.

ರೈತರಿಗೆ ಯಾವೆಲ್ಲ ಸಾಲ ಸೌಲಭ್ಯ ಲಭ್ಯವಿದೆ?

ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಿAದ ರೈತರಿಗೆ ಬೆಳೆ ಸಾಲ ಪ್ರಮುಖವಾಗಿ ಸಿಗುತ್ತಿದ್ದು; ಇದರ ಜೊತೆಗೆ ಅವಧಿ ಸಾಲ, ನಗದು ಸಾಲ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಸೇರಿ ಹಲವು ರೀತಿಯ ಸಾಲ ಸೌಲಭ್ಯ ಸಿಗುತ್ತದೆ. ಈ ಪೈಕಿ ಅಲ್ಪಾವಧಿ, ಮಧ್ಯಮಾವಧಿ ಸಾಲವನ್ನು ಹೆಚ್ಚಿನ ರೈತರು ಬಯಸಿ ಪಡೆಯುತ್ತಿದ್ದಾರೆ.

ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುವ ಅಲ್ಪಾವಧಿ ಸಾಲ ಮತ್ತು 5 ವರ್ಷಕ್ಕೆ ಸೀಮಿತವಾಗಿರುವ ಮಧ್ಯಮಾವಧಿ ಸಾಲವು ಅನೇಕ ಬಾರಿ ‘ಸಾಲಮನ್ನಾ’, ‘ಬಡ್ಡಿ ಮನ್ನಾ’ ಯೋಜನೆಗೆ ಒಳಪಡುತ್ತದೆ. ಹೀಗಾಗಿ ಸಾಮಾನ್ಯವಾಗಿ ರೈತರು ಈ ಎರಡು ಬಗೆಯ ಸಾಲವನ್ನು ಹೆಚ್ಚು ನಿರೀಕ್ಷಿಸುತ್ತಾರೆ.

ಯಾವುದಕ್ಕೆಲ್ಲ ಸಿಗುತ್ತೆ ಸಾಲ ?

ಕೃಷಿ ಸಾಲದ ಹೆಸರಿನಲ್ಲಿ ವಿತರಣೆಯಾಗುವ ಸಾಲವು ಬಹುತೇಕ ಕೃಷಿ ಮತ್ತು ತೋಟಗಾರಿಕೆಗೆ ಸಂಬAಧಿತ ಸಾಲವಾಗಿದೆ. ಇದನ್ನು ಬೆಳೆ, ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಗೋದಾಮು, ಫಾರ್ಮ್ ಹೌಸ್, ಕೊಳವೆ ಬಾವಿ, ನೀರಾವರಿ ಪಂಪ್‌ಸೆಟ್ ಖರೀದಿ, ಜಮೀನು ಅಭಿವೃದ್ಧಿ ಮುಂತಾದ ಉದ್ದೇಶಗಳಿಗಾಗಿ ಸಾಲ ಪಡೆಯಲು ಅವಕಾಶವಿದೆ. ಈ ಎಲ್ಲ ಸಾಲಗಳಿಗೆ ಕೃಷಿ ಜಮೀನು ಇಲ್ಲವೇ ಬೆಳೆಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗುತ್ತದೆ.

ಇನ್ನು ಕೃಷಿಯ ಉಪ ಕಸುಬು ಎಂದೇ ಪರಿಗಣಿತವಾದ ಹಸು, ಕುರಿ-ಮೇಕೆ, ಕೋಳಿ, ಮೊಲ, ಹಂದಿ, ಮೀನು ಸಾಕಾಣಿಕೆಗೆ ಪ್ರತ್ಯೇಕ ಸಾಲ ಸೌಲಭ್ಯಗಳಿದ್ದು ಇದರಲ್ಲಿ ‘ಪಶು ಕಿಸಾನ್ ಕ್ರೇಡಿಟ್ ಕಾರ್ಡ್’ ಸಾಲ ಪ್ರಮುಖವಾಗಿದೆ. ಪಶುಪಾಲನೆಗೆ ಎನ್‌ಎಲ್‌ಎಂ ಲೋನ್ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಹಲವು ಯೋಜನೆಗಳಿದ್ದು; ಇವುಗಳ ಅಡಿಯಲ್ಲಿ ರೈತರು ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಈಚೆಗೆ ವಿತರಣೆಯಾದ ಕೃಷಿ ಸಾಲವೆಷ್ಟು?

ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಪಡೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿAತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್’ಗಳು ಸೇರಿ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆಯುತ್ತಿದ್ದಾರೆ. 2022-23 ಮತ್ತು 2023-24ರ ಅವಧಿಯಲ್ಲಿ ವಿತರಣೆಯಾದ ಸಾಲ ಈ ಕೆಳಗಿನಂತಿದೆ:

  • 2022-23ರಲ್ಲಿ 19 ಲಕ್ಷ ರೈತರಿಗೆ 15,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ವಿತರಣೆಯಾಗಿದೆ.
  • 2023-24ರ ಫೆಬ್ರುವರಿ ಕೊನೆಗೆ 23 ಲಕ್ಷಕ್ಕೂ ಹೆಚ್ಚು ರೈತರಿಗೆ ಒಟ್ಟು 19,000 ಕೋಟಿ ರೂಪಾಯಿಗೂ ಅಧಿಕ ಸಾಲ ವಿತರಿಸಲಾಗಿದೆ.

ಸಾಲ ಪಡೆಯಲು ಯಾರೆಲ್ಲ ಅರ್ಹರು?

ಗಮನಾರ್ಹವೆಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಎಲ್ಲಾ ರೈತರಿಗೆ ಈ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿ೦ದ ಸಾಲ ಸೌಲಭ್ಯ ಸಿಗಲಿದೆ.

  • ರೈತರು ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಹೊಂದಿರುವ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬೇರೆ ಕಡೆ ಸಾಲ ಪಡೆದಿರಬಾರದು.
  • ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ.
  • ಒಂದು ವೇಳೆ ರೈತನು ವಾಸಿಸುತ್ತಿರುವ ಪ್ರದೇಶದಲ್ಲಿ ಸಂಘವು ಇಲ್ಲದಿದ್ದರೆ ಅಥವಾ ಸಾಲ ನೀಡಲು ಸಂಘವು ಸಶಕ್ತರಾಗಿಲ್ಲದಿದ್ದರೆ ಅಂತಹ ಸಂಘದಿAದ ನಿರಪೇಕ್ಷಣಾ ಪತ್ರ ಪಡೆದು ಸಂಬ೦ಧಿಸಿದ ಡಿಸಿಸಿ ಬ್ಯಾಂಕುಗಳ ಶಾಖೆಗಳಲ್ಲಿ ಸಾಲ ಪಡೆಯಬಹುದು.
  • ರೈತ ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಏನೆಲ್ಲ ದಾಖಲೆಗಳು ಬೇಕು?

ಬಹುಮುಖ್ಯವಾಗಿ ಡಿಸಿಸಿ ಬ್ಯಾಂಕಿನಿ೦ದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು.

ಪಹಣಿ, ಆಧಾರ್ ಕಾರ್ಡ್ ಇರಬೇಕು. ರೈತರು ಯಾವ ಬ್ಯಾಂಕಿನಿAದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.

WhatsApp Group Join Now
Telegram Group Join Now

Related Posts

error: Content is protected !!