ಉದ್ಯೋಗ

BMTC Conductor Recruitment 2024 : ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಹೀಗೆ ಅರ್ಜಿ ಸಲ್ಲಿಸಿ | ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಲಿಂಕ್ ಬಿಡುಗಡೆ

WhatsApp Group Join Now
Telegram Group Join Now

BMTC Conductor Recruitment 2024 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ (ದರ್ಜೆ-3 ಮೇಲ್ವಿಚಾರಕರ) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 19ರಿಂದ ಮೇ 18ರ ತನಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಾಗಿ ತಿಳಿಸಿದೆ.

BMTC Conductor Recruitment 2024 ಸಂಕ್ಷಿಪ್ತ ವಿವರ

  • ಉದ್ಯೋಗ ಸಂಸ್ಥೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
  • ನೇಮಕಾತಿ ಇಲಾಖೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
  • ಹುದ್ದೆಗಳ ಹೆಸರು : ಬಸ್ ನಿರ್ವಾಹಕ (Bus Conductor)
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಬೆಂಗಳೂರು

ಅರ್ಜಿ ಸಲ್ಲಿಕೆಗೆ ಅರ್ಹತೆಗಳೆನು?

  • ಕಂಡಕ್ಟರ್ ಹುದ್ದೆಗಳಿಗೆ ಪಿಯುಸಿ (ಆರ್ಟ್ಸ್/ ಕಾಮರ್ಸ್/ ಸೈನ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಸಿಬಿಎಸ್‌ಇ ಅಥವಾ ಐಸಿಎಸ್‌ಇ (ಪಿಯುಸಿ) ಓದಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮೂರು ವರ್ಷಗಳ ಡಿಪ್ಲೊಮಾದಲ್ಲಿ ತೇರ್ಗಡೆಯಾಗಿರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
  • ಮುಕ್ತ ವಿವಿಯಿಂದ ಪಡೆದ ಪಿಯುಸಿ/12ನೇ ತರಗತಿ ಅಥವಾ ಜೆಒಸಿ/ ಜೆಎಲ್‌ಸಿ ಕೋರ್ಸ್ಗಳನ್ನು ತತ್ಸಮಾನ ವಿದ್ಯಾರ್ಹತೆಯನ್ನಾಗಿ ಪರಿಗಣಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಹಾಗೂ ಬ್ಯಾಡ್ಜ್ ಅನ್ನು ಕೂಡ ಹೊಂದಿರಬೇಕು. 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಮಾಸಿಕ ಸಂಬಳವೆಷ್ಟು?

ಬಿಎಂಟಿಸಿ ಬಸ್ ಕಂಡಕ್ಟರ್ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ 18,660 ರೂಪಾಯಿ ಯಿಂದ 25,300 ರೂಪಾಯಿ ವರೆಗೆ ಮಾಸಿಕ ಸಂಬಳ ನಿಗದಿಪಡಿಸಲಾಗಿದೆ. ಜತೆಗೆ ವಿವಿಧ ಸವಲತ್ತುಗಳು ಅನ್ವಯವಾಗಲಿವೆ.

ವಯೋಮಿತಿ ಎಷ್ಟಿರಬೇಕು?

ಬಿಎಂಟಿಸಿ ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ವರ್ಗಗಳ ಅನುಸಾರ ಗರಿಷ್ಠ ವಯಸ್ಸಿನ ಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು, ಎಸ್‌ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷಗಳು ಹಾಗೂ ಮಾಜಿ ಸೈನಿರಿಗೆ 45 ವರ್ಷಗಳ ವಯೋಮಿತಿ ಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕದ ವಿವರ

  • ಸಾಮಾನ್ಯ ವರ್ಗ ಮತ್ತು 2a, 2b, 3a, 3b ಅಭ್ಯರ್ಥಿಗಳಿಗೆ : 750 ರೂಪಾಯಿ
  • ಎಸ್‌ಸಿ/ಎಸ್‌ಟಿ, ಪ್ರವರ್ಗ 1, ಮಾಜಿ ಸೈನಿಕರು, ಅಂಗವಿಕಲ ಅಭ್ಯರ್ಥಿಗಳಿಗೆ : 500 ರೂಪಾಯಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 19-04-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 18-05-2024

ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಕೆ ವಿಧಾನ

ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಮೊದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿವಿಧ ಹುದ್ದೆಗಳ ನೇಮಕಾತಿ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ HK / NHK ಹುದ್ದೆಗಳ ಅರ್ಜಿಗೆ ಪ್ರತ್ಯೇಕ ಲಿಂಕ್ ಇರುತ್ತವೆ. ಯಾವ ವೃಂದದ ಹುದ್ದೆಗೆ ಅರ್ಜಿ ಹಾಕಲು ನೀವು ಬಯಸುವಿರೋ ಆ ಲಿಂಕ್ ಕ್ಲಿಕ್ ಮಾಡಿ.

ಮತ್ತೊಂದು ವೆಬ್‌ಸೈಟ್ ತೆರೆಯುತ್ತದೆ. ಅಲ್ಲಿ ಮೊದಲ ಬಾರಿಗೆ ಕೆಇಎ ಹುದ್ದೆಗೆ ಅರ್ಜಿ ಹಾಕುವವರು New Applicant Registration ಎಂದಿರುವಲ್ಲಿ ಕ್ಲಿಕ್ ಮಾಡಿ. ಕೇಳಲಾದ ಮಾಹಿತಿ ನೀಡಿ ಅರ್ಜಿ ರಿಜಿಸ್ಟ್ರೇಷನ್ ಪಡೆಯಿರಿ. ರಿಜಿಸ್ಟ್ರೇಷನ್ ಪಡೆದಿರುವವರು ರಿಜಿಸ್ಟ್ರೇಷನ್ ಸಂಖ್ಯೆ, ಹೆಸರಿನ ಮೊದಲ 5 ಅಕ್ಷರ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್: Apply Online
  • ಅಧಿಸೂಚನೆ (ಆರ್‌ಪಿಸಿ) : Download
  • ಅಧಿಸೂಚನೆ (ಕೆಕೆ) : Download
WhatsApp Group Join Now
Telegram Group Join Now

Related Posts

No Content Available
error: Content is protected !!